ಮೂಗುಸುರೂಪಿಕೆ - ರೈನೋಪ್ಲಾಸ್ಟಿ

ಮುಖದ ಸೌಂದರ್ಯ ಹೆಚ್ಚಿಸಲು ಕೈಕೊಳ್ಳುವ ಸುರೂಪಣೆಯಲ್ಲಿ ಮೂಗನ್ನು ಸುಂದರಗೊಳಿಸುವ ಶಸ್ತ್ರಕ್ರಿಯೆಯ ಬಳಕೆ ತುಂಬ ಹೆಚ್ಚು. ಮೂಗಿನ ಮೇಲೆ ಶಸ್ತ್ರಕ್ರಿಯೆಯನ್ನು ಮೊದಲು ಮಾಡಿದ ದೂರದ ಗೌರವ ಕ್ರಿ.ಪೂ. ಆರನೇ ಶತಮಾನದಲ್ಲಿದ್ದ ಸುಶೃತಗೆ ಸಲ್ಲುತ್ತದೆ. ಇಂದು ಮೂಗಿನ ಮೇಲೆ ಕೈಕೊಳ್ಳುವ ಶಸ್ತ್ರಚಿಕಿತ್ಸೆ ತುಂಬಾ ಬದಲಾವಣೆಗಳನ್ನು ಕಂಡಿದ್ದು ಅದರಿಂದ ಮೂಗಿನ ಗಾತ್ರ ಕಡಿಮೆಮಾಡಬಹುದು, ಉದ್ದಮಾಡಬಹುದು, ಮೇಲಕ್ಕೆ ಮಾಡಬಹುದು ಇಲ್ಲವೆ ಹಿಂದಕ್ಕೆ ಮಾಡಬಹುದು. ಮೂಗಿನ ಹೊಳ್ಳೆಗಳನ್ನು ಕಿರಿದುಮಾಡಬಹುದು.

ಆಜನ್ಮ ವೈಕಲ್ಯಗಳಾದ ಭಾಗಿದ ಮಧ್ಯತೆರೆ (ಸೆಪ್ಟಂ), ಜೇನು (ಸ್ಯಾಠಲ್ ಬ್ಯಾಕ್) ತೆರ ಬದಲಾವಣೆ, ಇಲ್ಲವೆ ಸೌಂದರ್ಯ ಹೆಚ್ಚಿಸಲು ಉಬ್ಬಿದ, ಇಲ್ಲವೆ ಉದ್ದನೆಯ ಮೂಗು ಅಥವಾ ಶಸ್ತ್ರಕ್ರಿಯೆ, ಅಪಘಾತಗಳ ಫಲವಾಗಿ ಊನಗೊಂಡ ಮೂಗಿನ ರಿಪೇರಿಗೆ ಈ ಶಸ್ತ್ರಕ್ರಿಯೆ ಕೈಕೊಳ್ಳಲಾಗುತ್ತದೆ.

ಶಸ್ತ್ರಚಿಕಿತ್ಸೆಯಲ್ಲಿ ಮುಖ್ಯವಾಗಿ ಮೂಗಿನ ಆಕೃತಿಯನ್ನು ಬದಲಿಸುವುದು ಇಲ್ಲವೆ ಪ್ರತಿಸ್ಥಾಪಿಸುವುದಾಗಿದೆ. ಅದಕ್ಕಾಗಿ ಮೂಗಿನ ಆಧಾರ ಮೂಳೆ ಇಲ್ಲವೆ ಮೃದ್ವಸ್ಥಿಯನ್ನು ತೆಗೆಯಬೇಕು. ಅಲ್ಲಿಯ ರಚನೆಯನ್ನು ಸ್ಥಳಪಲ್ಲಟ ದೂರ ಮಾಡಿ ಆಕೃತಿ ಕೊಡಬೇಕು ಮತ್ತು ಕೆಲವೊಮ್ಮೆ ಸೈಲಾಸ್ಟಿಕ್ ನಾಟಿಗಳನ್ನು ಅಳವಡಿಸಬೇಕು. ನಂತರ ಚರ್ಮವನ್ನು ಹೊಸ ಆಕೃತಿಗೆ ಹೊಂದಿಸಬೇಕು. ಈ ಬಗೆಯ ಶಸ್ತ್ರಕ್ರಿಯೆ ಗುಕಾರ (ಟೆಂಟ್) ದನ್ನು ಮೇಲಕ್ಕೆತ್ತಿದಂತೆ ಇಲ್ಲವೆ ಕೆಳಕ್ಕಿಳಿಸುವಂತೆ ಮಾಡುತ್ತದೆ.

ಈ ಶಸ್ತ್ರಕ್ರಿಯೆ ಕೈಕೊಳ್ಳುವ ಮೊದಲು ವ್ಯಕ್ತಿಯ ಮುಖದ ಚಹರೆಯನ್ನು ಗಣನೆಗೆ ತೆಗೆದುಕೊಂಡು, ಶಸ್ತ್ರಕ್ರಿಯೆ ನಂತರ ದೊರೆಯುವ ಮುಖಚರ್ಯೆ ಆಕರ್ಷಕವಾಗಿರುವಂತೆ ಮಾಡಲಾಗುತ್ತದೆ. ಕೆಲವೊಮ್ಮೆ ಮೂಗಿನ ಶಸ್ತ್ರಕ್ರಿಯೆ ಜೊತೆ ಮೇಲ್ಭಟ, ಗದ್ಯದ ಸುರೂಪಿಕೆಯನ್ನು ಕೈಕೊಳ್ಳಲಾಗುತ್ತದೆ. ಶಸ್ತ್ರಕ್ರಿಯೆ ಮಾಡುವಾಗ ಮೂಗಿನತುದಿ, ಹೊಳ್ಳೆ, ಮೂಗಿನಬೇರು, ಸೇತುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಬಗೆಯ ಶಸ್ತ್ರಕ್ರಿಯೆ ಮೂಗಿನ ಬೆಳವಣಿಗೆ ಸಂಪೂರ್ಣವಾದ ಹರೆತನ ತಲುಪಿದ ಮೇಲೆ ಮಾಡಲಾಗುತ್ತದೆ.

ಈ ಶಸ್ತ್ರಕ್ರಿಯೆಯಲ್ಲಿ ರಕ್ತೋದ್ರೇಕ, ಸೋಂಕು, ಉಸಿರಾಟತೊಂದರೆ, ಕೆಳಗಿಳಿದ ತುದಿ, ಅದರ ಪರಿಣಾಮವಾಗಿ ತೋರಬಹುದು. ಅಪರೂಪವಾಗಿ ಶಸ್ತ್ರಕ್ರಿಯೆ ಮಾಡಿಸಿಕೊಂಡ ವ್ಯಕ್ತಿ ಈ ಸುರೂಪಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಬಹುದು.
(ಡಾ. ಅರವಿಂದ ದೇಸಾಯಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ